ಕೊಲೊರಾಡೋ ಕನ್ನಡ ಶಾಲೆ

ಕೊಲೊರಾಡೋ ಕನ್ನಡ ಕೂಟ ಕರ್ನಾಟಕದ ಭಾಷೆ, ಸಂಸ್ಕೃತಿ, ಕಲೆ ಮತ್ತು ಸಾಹಿತ್ಯವನ್ನು ಉತ್ತೇಜಿಸುವಲ್ಲಿ ಪ್ರಮುಖ ಪಾತ್ರವಹಿಸಿದೆ. ಕನ್ನಡ ಭಾಷೆ ಸುಮಾರು ೨೦೦೦ ವರ್ಷಗಳ ಇತಿಹಾಸ, ಸಾಹಿತ್ಯ ಸಂಸ್ಕೃತಿಗಳನ್ನೊಳಗೊಂಡಿರುವ ವಿಶ್ವ ಪರಂಪರೆಯ ಭಾಷೆಯೆಂದು ಪರಿಗಣಿಸಲಾಗಿದೆ. ಉದ್ಯೋಗ ಅರಸಿ ಅಮೇರಿಕದಲ್ಲಿ ನೆಲೆಸಿರುವ ನಾವು ಕನ್ನಡಿಗರು, ಇಲ್ಲೇ ಹುಟ್ಟಿ ಬೆಳೆಯುತ್ತಿರುವ ನಮ್ಮ ಮಕ್ಕಳು ನಮ್ಮ ಮಾತೃಭಾಷೆಯಿಂದ ವಂಚಿತರಾಗಬಾರದೆಂಬ ಸದ್ಧುದೇಶದಿಂದ ಕನ್ನಡ ಅಕಾಡೆಮಿಯ ಸಹಯೋಗದೊಂದಿಗೆ 'ಕೊಲೊರಾಡೋ ಕನ್ನಡ ಶಾಲೆ'ಯನ್ನು ಆರಂಭಿಸಿದ್ದೇವೆ. ಕನ್ನಡ ಅಕಾಡೆಮಿ ಕನ್ನಡವನ್ನು ಮಕ್ಕಳಿಗೆ  ಪ್ರಾಥಮಿಕ ಹಂತದಿಂದ ಪ್ರಾರಂಭಿಸಿ ಪಾಂಡಿತ್ಯ ಸಾಧಿಸುವ ತನಕ, ವಿದ್ಯುನ್ಮಾನ ಕ್ಷೇತ್ರದಲ್ಲಾಗುತ್ತಿರುವ ಬೆಳವಣಿಗೆಗಳನ್ನು ಸಮಪರ್ಕವಾಗಿ ಬಳಸಿಕೊಂಡು ಹಂತ ಹಂತವಾಗಿ ಕಲಿಸುವ ಧ್ಯೇಯವನ್ನು ಹೊಂದಿದೆ. ಕನ್ನಡ ಭಾಷೆಯಲ್ಲಿ ಸಾಕಷ್ಟು ಕಲಿಕೆ ಪಡೆಯಲು ವಿದ್ಯಾರ್ಥಿಯನ್ನು ಶಕ್ತಗೊಳಿಸುವಂತಹ ಬೆಂಬಲ ವಾತಾವರಣವನ್ನು ಉತ್ತೇಜಿಸಲು ನಾವು ಬಯಸುತ್ತೇವೆ. ಕನ್ನಡ ಭಾಷೆ ಮತ್ತು ಸಂಸ್ಕೃತಿಯನ್ನು ಮೌಲ್ಯೀಕರಿಸುವ ಮತ್ತು ಸುಸ್ಥಿರ ಸಮುದಾಯವನ್ನು ಸೃಷ್ಟಿಸುವಂತಹ ವಾತಾವರಣವನ್ನು ಸೃಷ್ಟಿಸಲು ನಾವು ಆಶಿಸುತ್ತೇವೆ.


ಕೊಲೊರಾಡೋ ಮನೆ ಮನೆಗಳಲ್ಲಿ, ಮನ ಮನಗಳಲ್ಲಿ ಕನ್ನಡದ ದೀಪ ಹಚ್ಚೋಣ. ಬನ್ನಿ, ಕೊಲೊರಾಡೋ ಕನ್ನಡ ಶಾಲೆಯೊಂದಿಗೆ ಕೈ ಜೋಡಿಸಿ!  

ಪ್ರಾಂಶುಪಾಲರು

ಶಶಿಕಿರಣ್ ಕುಣಿಗಲ್

ಶಶಿಕಿರಣ್ ಅವರು ಡೆನ್ವರ್ ಪ್ರದೇಶದಲ್ಲಿ 26 ವರ್ಷಗಳಿಂದ ವಾಸಿಸುತ್ತಿದ್ದಾರೆ. ಅವರು ದೂರಸಂಪರ್ಕ ನಿರ್ವಹಣೆಯಲ್ಲಿ ಸ್ನಾತಕೋತ್ತರ ಪದವಿ ಮತ್ತು ಕಂಪ್ಯೂಟರ್ ಸೈನ್ಸ್ ಎಂಜಿನಿಯರಿಂಗ್‌ ಪದವಿ ಪಡೆದಿದ್ದಾರೆ. ಅವರು ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ 30 ವರ್ಷಗಳಿಂದ ವಿವಿಧ ತಾಂತ್ರಿಕ ಮತ್ತು ನಾಯಕತ್ವದ ಪಾತ್ರಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರು ಕೊಲೊರಾಡೋ ಕನ್ನಡ ಕೂಟದ ಪ್ರಸ್ತುತ ಅಧ್ಯಕ್ಷರಾಗಿದ್ದಾರೆ. ಅವರು ತಮ್ಮ ಕುಟುಂಬದೊಂದಿಗೆ ವಿಶ್ವದಾದ್ಯಂತ ಪ್ರಯಾಣಿಸಲು ಇಷ್ಟಪಡುತ್ತಾರೆ ಮತ್ತು ಹವ್ಯಾಸಕ್ಕಾಗಿ ಅಮೇರಿಕ, ಭಾರತ, ನೇಪಾಳ ಹಾಗೂ ಆಫ್ರಿಕಾ ಸೇರಿದಂತೆ ವಿಶ್ವದ ಇತರ ಭಾಗಗಳಲ್ಲಿ ಪರ್ವತಾರೋಹಣ ಮಾಡಿದ್ದಾರೆ. 'ಕನ್ನಡ ಕಲಿ' ಉಪಕ್ರಮ ಅವರ ಧೀರ್ಘ ಕಾಲದ ಕನಸು, ಇದನ್ನು ನನಸು ಮಾಡಿದ್ದಕ್ಕಾಗಿ ಅವರು ಕನ್ನಡ ಅಕಾಡೆಮಿ ಮತ್ತು ಎಲ್ಲಾ ಸ್ವಯಂಸೇವಕ ಶಿಕ್ಷಕರಿಗೆ ಚಿರಋಣಿಯಾಗಿದ್ದಾರೆ. ಅವರ ಧ್ಯೇಯ - "ಸಿರಿಗನ್ನಡಂ ಗೆಲ್ಗೆ, ಸಿರಿಗನ್ನಡಂ ಕೊಲೊರಾಡೋ ಕಂದಮ್ಮಗಳ ಬಾಳ್ಗೆ". 

ಶಿಕ್ಷಕರು

ಸುಮ ಶೇಖರ್

ಕೊಲೊರಾಡೋ ಕನ್ನಡ ಕಲಿ

ಉಷಾ ಆರಾಧ್ಯ

ಕೊಲೊರಾಡೋ ಕನ್ನಡ ಕಲಿ 

ಜಯಸುಧಾ ತಿರು

ಕೊಲೊರಾಡೋ ಕನ್ನಡ ಕಲಿ 

ಶ್ರೀದೇವಿ ಕಲಗೆ 

ಕೊಲೊರಾಡೋ ಕನ್ನಡ ಕಲಿ

ಶ್ರುತಿ ಬಾಲಕೃಷ್ಣನ್

ಕೊಲೊರಾಡೋ ಕನ್ನಡ ಕಲಿ

ಕಾರ್ಯ ನಿರ್ವಹಣೆ

ಸುಷ್ಮಾ ನಾಗರಾಜ್

ಸ್ವಯಂಸೇವಕ

ಪ್ರಣವ್ ಕಡೆಕೊಡಿ